ಧೌಮ್ಯ
 	ಪಾಂಡವರ ಪುರೋಹಿತ. ಪ್ರತ್ಯೂಷನ ಮಗ. ದೇವಲ ಮಹರ್ಷಿಯ ಒಡಹುಟ್ಟಿದವ. ಪಾಂಡವರ ವನವಾಸ ಕಾಲದಲ್ಲಿ ಅನೇಕ ತೀರ್ಥಗಳ ಮಹಿಮೆಯನ್ನೂ ಅe್ಞÁತವಾಸಕ್ಕೆ ಹೊರಟಾಗ ಅರಮನೆಯಲ್ಲಿ ಸೇವಕರು ವಾಸಮಾಡಬೇಕಾದ ರೀತಿಯನ್ನೂ ಅವರ ಕರ್ತವ್ಯಗಳನ್ನೂ ತಿಳಿಸಿದನಲ್ಲದೆ ಅವರು ಅe್ಞÁತವಾಸವನ್ನು ಮಾಡುತ್ತಿದ್ದಾಗ ಅವರ ಅಗ್ನಿಹೋತ್ರಗಳನ್ನು ಕಾಪಾಡಿಕೊಂಡು ಅರಣ್ಯದಲ್ಲಿಯೇ ಇದ್ದ ಪಾಂಡವರಿಗೆ ಧರ್ಮವನ್ನು ಉಪದೇಶಿಸಿದ್ದೂ ಈತನೇ.

	ಆಪೋದನೆಂಬುದು ಈತನ ನಾಮಾಂತರ. ಈತನಿಗೆ ಉಪಮನ್ಯು, ಅರುಣಿ, ಬೈದ ಎಂಬ ಮೂವರು ಶಿಷ್ಯರಿದ್ದರು.
(ಎಚ್.ಬಿ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ